Tuesday, January 14, 2020

ಪುಸ್ತಕ ವಿಮರ್ಶೆ - ಎಂಟೆಬೆ

ಪುಸ್ತಕ: ಎಂಟೆಬೆ 
ಲೇಖಕ: ಸಂತೋಷಕುಮಾರ್ ಮೆಹೆಂದಳೆ 



ಎಂಟೆಬೆ ಪುಸ್ತಕವು ಸತ್ಯ ಘಟನೆ ಆಧಾರಿತ ಕಾದಂಬರಿಯಾಗಿದ್ದು, ಇಸ್ರೇಲ್ ದೇಶದ 
ವಿಮಾನವನ್ನಪಹರಿಸಿದಾಗ ಇಸ್ರೇಲ್ ಮಿಲಿಟರಿ ತಂಡ ನಡೆಸಿದ ಯಶಸ್ವೀ ಕಾರ್ಯಾಚರಣೆಯ ಬಗ್ಗೆ ಇದೆ. 
ಪುಸ್ತಕ ಓದಿದ ನಂತರ ತುಂಬಾ ಸಂತೋಷವಾಯಿತು. ನಾನು ಮೊದಲು ಕೆಲಸ ಮಾಡುತ್ತಿದ್ದ ಕಂಪನಿಯಲ್ಲಿ ಒಂದು ಪ್ರಾಜೆಕ್ಟ್ ನಲ್ಲಿ ಕೆಲ ಇಸ್ರೇಲಿಗಳು ಇದ್ದರು. ಇವರ ಉಪಸ್ಥಿತಿ ಕೇವಲ ಕಾನ್ಫರೆನ್ಸ್ ಕಾಲ್ ನಲ್ಲಿ ಮಾತ್ರ. ಸ್ವಲ್ಪ ಆರೋಗ್ಯದಲ್ಲಿ ಏರುಪೇರಾಗಿ ಕೊಯ್ಯ ಕೊಯ್ಯ ಎಂದು ಕಾಲ್ ನಲ್ಲಿ ಕೆಮ್ಮಿದರೆ, ಅಮೆರಿಕನ್ನರು,  ಫಾರ್ಮಾಲಿಟಿಗೋಸ್ಕರವಾದ್ರೂ ಕೇಳಿದ್ದಿದೆ. ಆದರೆ ಈ ಇಸ್ರೇಲಿಗರ ಧ್ವನಿ ಮಾತ್ರ ಯಾವಾಗಲೂ ಒಂದೇ,  ನ್ಯೂಸ್ ರೀಡರ್ ತರಹ! ಕೆಲಸದ ಒಂದು ಪರಿದಿಯೆಳೆದರೆ ಮುಗೀತು. ಅಷ್ಟೇ, ಎಂಥ ಎಮರ್ಜೆನ್ಸಿ ಇದ್ರೂ ಹೆಚ್ಚಿನ ಕೆಲಸ ಮಾಡಾಂಗಿಲ್ಲ. ಆದ್ರೆ ಕೊಟ್ಟ ಕೆಲಸ ಕರೆಕ್ಟ್ ಟೈಮಿಗೆ ರೆಡಿ. ಪುಸ್ತಕ ಓದಿದ ಮೇಲೆ ಇವರು ಮಾಡಿದ್ದು ಸರೀನೇ ಎಂದೆನಿಸಿತು. 

ಪುಸ್ತಕದಲ್ಲಿ ಬರುವ ಭೌಗೋಳಿಕ ವಿವರಣೆ, ರಾಜಕೀಯ ಹಾಗೂ ರಣರಂಗದ ಯಥಾವತ್ ಚಿತ್ರಣ ತುಂಬಾ ರೋಚಕವಾಗಿ ಲೇಖಕರು ಬರೆದಿದ್ದಾರೆ. ಸತ್ಯಘಟನೆ ಆಧಾರಿತ ಕಾದಂಬರಿ ಆದ್ದರಿಂದ ಲೇಖಕರ ಗ್ರೌಂಡ್ ವರ್ಕ್ ತುಂಬಾ ಪ್ರಶಂಸನೀಯ. ಆದರೆ , ಇಂಥ ಸತ್ಯ ಘಟನೆ ಆಧಾರಿತ ಕಾದಂಬರಿ ಬರೆಯುವಾಗ, ಕಾದಂಬರಿಯನ್ನು  ಅಧ್ಯಾಯಗಳಾಗಿ ವಿಂಗಡಿಸಿ ಅದನ್ನು ಪರಿವಿಡಿ ಅಂತೆ ಸೇರಿಸಿದ್ದರೆ ಇನ್ನೂ ಚೆನ್ನಾಗಿರುತ್ತಿತ್ತು. .

ಇನ್ನು, ಕಾದಂಬರಿಯಲ್ಲಿ ಬರುವ  'ಬ್ರಿಗೆಟ್ಟಿ ಎಂಬ ಮಹಿಳಾ ಉಗ್ರವಾದಿಯನ್ನು ಗುಂಡಿಡುವಾಗ' ಲೇಖಕರು ಮಹಿಳಾ ಡ್ರೈವಿಂಗ್, body reflex of women ಬಗ್ಗೆ ಬರೆದಿದ್ದು. ಬ್ರಿಗೆಟ್ಟಿ ಒಬ್ಬ ಟ್ರೈನ್ಡ್ ಕ್ರಿಮಿನಲ್ ಅಥವಾ ಟೆರ್ರರಿಸ್ಟ್ ಇರುವುದರಿಂದ ಆಕೆಯ ಮನೋಸ್ಥಿತಿ ಬೇರೆಯೇ ಆಗಿರುತ್ತದೆ. ಹೀಗಾಗಿ mentality, body reflex ಎಲ್ಲವೂ ಒಬ್ಬ ಟೆರ್ರರಿಸ್ಟ್ ತರಹವೇ ಆಗಿರುತ್ತದೆ, ಇದನ್ನು ಒಬ್ಬ ಸಾಮಾನ್ಯ ಮನುಷ್ಯ ಜೀವಿಗೆ ಹೋಲಿಸಲು ಅಸಾಧ್ಯ (ನನ್ನ ಪರಿಚಯದ ಡಾಕ್ಟರ್ ಒಬ್ಬರು ಫಾರೆನ್ಸಿಕ್ ಮೆಡಿಸಿನ್ ವಿಷಯದಲ್ಲಿ ಓದಿ ಹೇಳಿದ್ದರ ಸಾರಾಂಶ ) . ಹೀಗಾಗಿ ಇದನ್ನು ಕಾದಂಬರಿ ಎಂದೇ ಅನುಭವಿಸಬೇಕೇ ಹೊರತು ಲೇಖಕರು ಎಲ್ಲಾ ಕಾಲಕ್ಕೂ ಅಪ್ರಿಯ ಸತ್ಯವನ್ನೇ ಬರೆಯುತ್ತಿದ್ದಾರೆ ಎಂದು ಭಾವಿಸಬೇಕಾಗಿಲ್ಲ ಎಂದುಕೊಂಡಿದ್ದೇನೆ. 

ಒಟ್ಟಾರೆಯಾಗಿ, ಎಂಟೆಬೆ ಕಾರ್ಯಾಚರಣೆ ಬಗ್ಗೆ ಗೊತ್ತಿದ್ದರೂ ಕೂಡ, ಇದನ್ನು ಓದಿ ಅನುಭವಿಸುವುದರ ಮಜವೇ ಬೇರೆ. ಅದರಲ್ಲೂ ಮಾತೃಭಾಷೆಯಲ್ಲಿ ಓದುವುದೆಂದರೆ ಸ್ವರ್ಗಸುಖ. ಇದನ್ನು ಬರೆದ ಲೇಖಕರಿಗೆ  ನನ್ನ ಕೃತಜ್ಞತೆಗಳು. 

-Anupama K Benachinamaradi
20th December 2019

No comments:

Post a Comment

ಪುಸ್ತಕ: ಶಾಲಭಂಜಿಕೆ

  ಪುಸ್ತಕ: ಶಾಲಭಂಜಿಕೆ ಲೇಖಕ: ಡಾ|| ಕೆ ಎನ್ ಗಣೇಶಯ್ಯ  ಬೆಲೆ: ೧೩೦ ಪ್ರಕಾಶನ: ಛಂದ ಪ್ರಕಾಶನ ಮುದ್ರಣ: ೬ ಪುಸ್ತಕವು ಸುಮಾರು ೭-೮ ಕತೆಗಳ ಸಂಕಲನವಾಗಿದೆ. ಕಡಿಮೆ ಸಂಖ್ಯೆಯ...