Monday, March 15, 2021

ಪುಸ್ತಕ: ದಿ ಗ್ರಫ್ಫಲೋ



 ಪುಸ್ತಕ: ದಿ ಗ್ರಫ್ಫಲೋ

ಲೇಖಕಿ: ಜೂಲಿಯಾ ಡೊನಾಲ್ಡ್ ಸನ್ 

ಕಲಾವಿದ: ಆಕ್ಸೆಲ್ ಶಿಫ್ಲರ್
 
ಬೆಲೆ: 350


ಈ ಕಥೆಯು ಗ್ರಫ್ಫಲೋ ಎನ್ನುವ ವಿಚಿತ್ರ ಜೀವಿಯ ಬಗ್ಗೆ ಹೇಳುವ ಇಲಿಯ ಸಾಹಸ ಬಗ್ಗೆ ಇದೆ. ಪುಸ್ತಕದಲ್ಲಿರುವ ಚಿತ್ರಗಳಂತೂ ಅದ್ಭುತವಾಗಿವೆ. ನನ್ನ ಮಗ ಸುಮಾರು ಹೊತ್ತು ಚಿತ್ರಗಳನ್ನು ಗಮನಿಸುತ್ತಲೇ ಇದ್ದ. ಆದರೆ ಅದ್ಯಾಕೋ ಮುಕ್ತಾಯವನ್ನು ಕೇಳಿ ಭಾ ಎಂದು ಅಳತೊಡಗಿದ. ಹೀಗಾಗಿ ನಾನು ಭಾರತೀಯ ಶೈಲಿಗೆ ತಕ್ಕಂತೆ ಕಥೆಯ ಮುಕ್ತಾಯವನ್ನು ಬದಲಿಸಬೇಕಾಯಿತು! ಪುಸ್ತಕದಲ್ಲಿರುವ ಪ್ರಾಸಬದ್ಧ ಪದಗಳನ್ನು ಕೇಳುವುದೇ ಒಂದು ಆನಂದ! ಹಾಗು ಮಕ್ಕಳಿಗೆ ಅದನ್ನು ಕೇಳುವಾಗ ಇಷ್ಟವೂ ಆಗುತ್ತದೆ. ಈ ಲೇಖಕಿಯ ಎಲ್ಲ ಕಥೆಗಳೂ ಇದೆ ತರಹ ಪ್ರಾಸಬದ್ಧವಾಗಿಯೇ ಇವೆ. ಎಷ್ಟೋ ಹೊಸ ಪದಗಳ ಪರಿಚಯವೂ ಆಗುತ್ತದೆ. 

Thursday, March 4, 2021

ಪುಸ್ತಕ:ಕರಿಸಿರಿಯಾನ


 ಪುಸ್ತಕ:ಕರಿಸಿರಿಯಾನ   

ಲೇಖಕ: ಡಾ|| ಕೆ ಎನ್ ಗಣೇಶಯ್ಯ 

ಬೆಲೆ: ೨೧೫

ಪ್ರಕಾಶನ: ಸಾಹಿತ್ಯ ಭಂಡಾರ ಪ್ರಕಾಶನ

ಮುದ್ರಣ: ಏಳನೇಯ ಮುದ್ರಣ ೨೦೨೧

ಎಂದಿನಂತೆ ಈ ಕಾದಂಬರಿಯೂ ಕೂಡ ರೋಚಕವಾಗಿದ್ದು, ವಿಜಯನಗರ ಸಾಮ್ರಾಜ್ಯದ ಅತಿ ಸೂಕ್ಷ್ಮ ವಿಚಾರಗಳನ್ನು ಒಳಗೊಂಡಿದೆ. ಅದಕ್ಕೆ ಆಕರಗಳನ್ನು ಕೂಡ ಅಲ್ಲಲ್ಲಿ ಒದಗಿಸಿದ್ದಾರೆ. ಇತಿಹಾಸದ ಅತ್ಯೋನ್ನತ ಸಾಮ್ರಾಜ್ಯದ ಬಗ್ಗೆ ಇದ್ದ ಮಾಹಿತಿಗಳಲ್ಲದೆ ಕೇಳರಿಯದ ಸಂಗತಿಗಳನ್ನು ಕಾದಂಬರಿ ಓದುವ ಮೂಲಕ ತಿಳಿದುಕೊಳ್ಳಬಹುದು! ಇತರ ಕಾದಂಬರಿಗಳಾದ  ಕಪಿಲಿಪಿಸಾರ, ಚಿತಾದಂತ, ಬಳ್ಳಿಕಾಳಬೆಳ್ಳಿ ಹಾಗೆ ಈ ಕಾದಂಬರಿಯನ್ನೂ ಅದೇ ಶೈಲಿಯಲ್ಲಿ ಬರೆಯಲ್ಪಟ್ಟಿದ್ದರೂ ಎಲ್ಲಿಯೂ ಬೇಸರವೆನಿಸದೆ ಓದಿಸಿಕೊಂಡು ಹೋಗುತ್ತದೆ. 
ಹೆಳವರ ಹಾಡು, ಜಾನಪದ ಹಾಡುಗಳ ತಾತ್ಪರ್ಯ, ಹಂಪಿಯ ವಿಶೇಷ ಸಸ್ಯ ಸಂಪತ್ತು, ತಿರುಪತಿ ವಿಗ್ರಹದ ವಿವಾದಾಸ್ಪದ ಪುರಾವೆಗಳು, ನಕ್ಷೆಯನ್ನು ಗುರುತಿಸುವ ಪರಿ, ಅವಶೇಷಗಳ ಸುಳಿವಿನಿಂದ ನಿಧಿ ಪತ್ತೆ ಮಾಡುವ ಹಾಗೆ ಕಾದಂಬರಿಯನ್ನು ಹೆಣೆದ ರೀತಿ ಅನನ್ಯ! ಬಹುಷಃ ಚರಿತ್ರೆಯನ್ನು ಈ ತರಹ ಕೂಡ ತಿಳಿದುಕೊಳ್ಳಬಹುದು ಹಾಗು ಅದು ಸತ್ಯವಾಗಿರಲೂಬಹುದು! ಹೀಗಾಗಿಯೇ ಲೇಖಕರ ಯಾವ ಕೃತಿಯನ್ನೂ ಓದದೇ ಇರಲಿಕ್ಕಾಗದು. ಇದೆಲ್ಲವನ್ನು ಓದಿ ತಿಳಿದು ನಂತರ ಕಾದಂಬರಿ ರಚಿಸಬೇಕೆಂದರೆ ಲೇಖಕರು ಅದೆಷ್ಟು ಶ್ರಮ ವಹಿಸಿರಬಹುದು! 

Wednesday, March 3, 2021

ಪುಸ್ತಕ: ಮದನಿಕೆ, ದಿ ಲಾಸ್ಟ ಸೀನ್

ಪುಸ್ತಕ: ಮದನಿಕೆ, ದಿ ಲಾಸ್ಟ ಸೀನ್ 

ಲೇಖಕ: ರಮೇಶ್ ಶೆಟ್ಟಿಗಾರ್ ಮಂಜೇಶ್ವರ್ 
ಬೆಲೆ: ೧೨೦
ಪ್ರಕಾಶನ: ಟೋಟಲ್ ಕನ್ನಡ 
ಮುದ್ರಣ: ೨೦೧೯

ಕಾದಂಬರಿಯು ಬೇಲೂರು, ಹಳೇಬೀಡು ದೇವಾಲಯಗಳ ಇತಿಹಾಸದ ಮೇಲೆ ಆಧಾರವಾಗಿದ್ದರೂ ಇನ್ನಷ್ಟು ಕಥನವಿರಬೇಕಾಗಿತ್ತು. ಮುಖ್ಯ ಕಥೆ ಇರುವುದು ಕೊನೆಯ ೨೦ ಪುಟಗಳಲ್ಲಿ. ಒಂದು ಸಲ ಓದಬಹುದಾದ ಪುಸ್ತಕವಿದ್ದರೂ ಉಳಿದ ದೃಶ್ಯಗಳನ್ನು ಕಣ್ಣಿಗೆ ಕಟ್ಟುವಂತೆ ಬರೆಯಲಾಗಿದೆ. 

ಪುಸ್ತಕ: ಶಾಲಭಂಜಿಕೆ

  ಪುಸ್ತಕ: ಶಾಲಭಂಜಿಕೆ ಲೇಖಕ: ಡಾ|| ಕೆ ಎನ್ ಗಣೇಶಯ್ಯ  ಬೆಲೆ: ೧೩೦ ಪ್ರಕಾಶನ: ಛಂದ ಪ್ರಕಾಶನ ಮುದ್ರಣ: ೬ ಪುಸ್ತಕವು ಸುಮಾರು ೭-೮ ಕತೆಗಳ ಸಂಕಲನವಾಗಿದೆ. ಕಡಿಮೆ ಸಂಖ್ಯೆಯ...