ಪುಸ್ತಕ: ಕೆನ್ನಾಯಿಯ ಜಾಡಿನಲ್ಲಿ
ಲೇಖಕರು: ಕೃಪಾಕರ್ ಮತ್ತು ಸೇನಾನಿ
ಬೆಲೆ:೧೬೨
ಪ್ರಕಾಶನ: ಪುಸ್ತಕ ಪ್ರಕಾಶನ
'ಕೆನ್ನಾಯಿ.. ' ಪುಸ್ತಕವು ಅದ್ಭುತವಾಗಿ ಬರೆಯಲ್ಪಟ್ಟಿದೆ. ಇದು ಪ್ರಜಾವಾಣಿ ಪತ್ರಿಕೆಯಲ್ಲಿ ಪ್ರಕಟಗೊಂಡ ಅಂಕಣಗಳ ಸಂಗ್ರಹ. ಮುಖ್ಯವಾಗಿ ಇದರಲ್ಲಿ ಕಾಡು ನಾಯಿಗಳ ಬಗ್ಗೆ ಬರೆದಿದ್ದರೂ, ಕಾಡಿನಲ್ಲಿ ಅನುಭವಿಸಿದ ಇತರ ರೋಚಕ ಕಥೆಗಳೂ ಇವೆ. ಹಿಂದೆಯೂ ಕೂಡ ಕೆನೆತ್ ಆಂಡರ್ಸನ್ ಅವರ ಹೊಳಲ್ಕೆರೆಯ ನರಭಕ್ಷಕದಲ್ಲಿ ಕಾಡಿನ ಅನುಭವಗಳನ್ನು ಓದಿದ್ದರೂ ಅದು ಒಬ್ಬ ಬೇಟೆಗಾರನ ದೃಷ್ಟಿಕೋನದಲ್ಲಿತ್ತು. ಆದರೆ ಈ ಪುಸ್ತಕದಲ್ಲಿ ಇಬ್ಬರು ಸಂಶೋಧಕರ ಅನುಭವ ಓದಿದ ಮೇಲೆ, ಮುನ್ನುಡಿಯಲ್ಲಿ ತೇಜಸ್ವಿ ಹೇಳಿದ್ದಂತೆ ಕಾಲ್ಪನಿಕದಂತೆಯೂ ಅನಿಸಿದೆ ಏಕೆಂದರೆ ಸಾಮಾನ್ಯ ಮನುಷ್ಯರಿಗೆ ಕಾಡು ಎನ್ನುವುದು ಕಾಲ್ಪನಿಕವೇ ಸರಿ! ಇದರಲ್ಲಿ ಆನೆ ಅಟ್ಟಿಸಿಕೊಂಡು ಬಂದ ಪ್ರಸಂಗ ಓದಿದಾಗ ನಗು ಉಕ್ಕಿದರೂ ಅದೆಷ್ಟು ಗಂಭೀರವಿತ್ತೆಂದೂ ಅನಿಸಿದ್ದಿದೆ. ಓದಿದಷ್ಟು ಮತ್ತೆ ಮತ್ತೆ ಕಾಡಿನಲ್ಲಿ ಕಳೆದು ಹೋಗುವ ಇನ್ನಷ್ಟು ಬರೆಯಬಾರದಿತ್ತೇ ಎಂದೆನಿಸಿತು. ಇದರಲ್ಲಿ ಉಲ್ಲೇಖಿಸಿರುವ ಪಕ್ಷಿಗಳು, ಕಾಡು ಕುರುಬರು , ಕಾಡು ನಾಯಿಗಳ ಹೊರತು ಇತರ ವನ್ಯ ಜೀವಿಗಳ ನಡವಳಿಕೆಗಳು ಎಲ್ಲವೂ ಅತ್ಯಮೂಲ್ಯ ದಾಖಲೆಗಳಾಗಿವೆ.
ಪುಸ್ತಕ ಓದಿದ ನಂತರ, ಲೇಖಕರ ಗ್ರೀನ್ ಆಸ್ಕರ್ ಪ್ರಶಸ್ತಿ ಪಡೆದಿರುವ 'wild dog diaries' documentary ಅನ್ನು ಯು ಟ್ಯೂಬ್ ಅಲ್ಲಿ ಸಾಧ್ಯವಾದರೆ ನೋಡಿ. ಹುಲಿ, ಸಿಂಹಗಳ ಅಧ್ಯಯನಕ್ಕಿಂತಲೂ ಕೆನ್ನಾಯಿಗಳ ಅಧ್ಯಯನ ಎಷ್ಟು ಕ್ಲಿಷ್ಟ ಎಂದು ಮನದಟ್ಟಾಗುತ್ತದೆ. ಇದನ್ನು ಓದುವ ವರೆಗೆ ನನಗೆ ಕೆನ್ನಾಯಿಗಳ ಬಗ್ಗೆ ಹೆಚ್ಚು ಆಸಕ್ತಿಯಿರಲೇ ಇಲ್ಲ. ಪುಸ್ತಕ ಕೆನ್ನಾಯಿಗಳ ಬಗ್ಗೆ ಪ್ರೀತಿ ಹುಟ್ಟಿಸಿತು!

No comments:
Post a Comment