ಪುಸ್ತಕ: ನಮ್ಮಮ್ಮ ಅಂದ್ರೆ ನಂಗಿಷ್ಟ
ಲೇಖಕ: ವಸುಧೇಂದ್ರ
ಬೆಲೆ: ೯೦
ಪ್ರಕಾಶನ: ಛಂದ ಪ್ರಕಾಶನ
ಮುದ್ರಣ: ೧೯ ನೇ ಮುದ್ರಣ, ೨೦೧೯
ಪುಸ್ತಕವು ಲೇಖಕರ ಪ್ರಬಂಧ ಸಂಕಲನವಾಗಿದ್ದು, ಒಟ್ಟು ೧೨ ಪ್ರಬಂಧಗಳಿವೆ. ಓದಿದಂತೆಲ್ಲ ಕಾಡುವ ಈ ಪ್ರಬಂಧಗಳು ಕಥೆಗಳೆನಿಸದೆ ಇರಲಾರದು. ಇದಕ್ಕೆ ಲೇಖಕರ ಬರವಣಿಗೆಯನ್ನೇ ಹೊಗಳಬೇಕು. ಕೆಲವು ಪ್ರಬಂಧಗಳು ಕುಟುಂಬ ಸದಸ್ಯರ ಆಪ್ತ ನೆನಪುಗಳನ್ನು ಹರವಿಟ್ಟರೆ, ಇನ್ನು ಕೆಲವು ಬಾಲ್ಯಕ್ಕೆ ಸಂಭಂದಿಸಿದ್ದು ನಗೆಯ ಹೊಳೆಯನ್ನೇ ಹರಿಸುತ್ತವೆ. ಅಲ್ಲದೆ, ಲೇಖಕರ ವೃತ್ತಿ ಜೀವನ, ಕಾರು ಕಲಿಯುವ ಅನುಭವ ಹೀಗೆ ಹತ್ತು ಹಲವಾರು ಅನುಭವಗಳ ಹೂರಣ.
ಪುಸ್ತಕದ ವಿಷಯಗಳಂತೆಯೇ ಮುಖಪುಟ ಕೂಡ ಆಕರ್ಷಣೀಯ.
ANUPAMA .K.BENACHINAMARDI

No comments:
Post a Comment