Wednesday, January 6, 2021

ಪುಸ್ತಕ: ಬಳ್ಳಿಕಾಳ ಬೆಳ್ಳಿ




ಪುಸ್ತಕ: ಬಳ್ಳಿಕಾಳ ಬೆಳ್ಳಿ  

ಲೇಖಕ: ಡಾ|| ಕೆ ಎನ್ ಗಣೇಶಯ್ಯ 

ಬೆಲೆ: ೨೨೫

ಪ್ರಕಾಶನ: ಅಂಕಿತ ಪ್ರಕಾಶನ

ಮುದ್ರಣ: ಎರಡನೆಯ ಮುದ್ರಣ ೨೦೧೮

ಈ ಕಾದಂಬರಿಯು ಇತಿಹಾಸದ ಎಳೆಯಿಂದ ಶುರುವಾಗಿ ನಿಧಿ ಹುಡುಕುವತ್ತ ಸಾಗುತ್ತದೆ. ಬಹಳಷ್ಟು ಸತ್ಯ ಘಟನೆಗಳನ್ನಾಧರಿಸಿದ ಇದು ಸತ್ಯ ಘಟನೆಯಂತೆ ಕಣ್ಣಿಗೆ ಕಟ್ಟುವಂತೆ ಬರೆಯಲ್ಪಟ್ಟಿದೆ. ಅರ್ಪಣೆಯಲ್ಲಿ ಉಲ್ಲೇಖಿಸಿದಂತೆ 'ಮರೆತು ಹೋದ ರಾಣಿಯರಿಗೆ ' ತಕ್ಕಂತೆ ಇಲ್ಲಿ ಗತಕಾಲದ 'ಮೆಣಸಿನ ರಾಣಿ' ಯ ಬಗ್ಗೆ ಅಚ್ಚರಿಯ ವಿಷಯಗಳಿವೆ. ಹಾಗೆಯೆ ಭೂತಾರಾಧನೆ, ಹಾಗು  ಜಾನಪದ ಕಲೆಗೆ ಇರುವ ಮಹತ್ವವನ್ನು ಎತ್ತಿಹಿಡಿಯುತ್ತದೆ. ಈ ರೋಚಕ ಕಾದಂಬರಿಯನ್ನು ಓದಿದ ನಂತರ ನಮ್ಮ ಪೂರ್ವಿಕರ ಬಗ್ಗೆ ಹೆಮ್ಮೆಯೆನಿಸಿ ಹೃದಯ ತುಂಬಿ ಬರುವಲ್ಲಿ ಸಂಶಯವೇ ಇಲ್ಲ. 

ಮುಖಪುಟದ ವಿನ್ಯಾಸ, 'ಬೆಳ್ಳಿ ' ಬರೆಯಲಾದ ವಿಧಾನ ಎಲ್ಲವೂ ಆಕರ್ಷಕವಾಗಿದೆ!

No comments:

Post a Comment

ಪುಸ್ತಕ: ಶಾಲಭಂಜಿಕೆ

  ಪುಸ್ತಕ: ಶಾಲಭಂಜಿಕೆ ಲೇಖಕ: ಡಾ|| ಕೆ ಎನ್ ಗಣೇಶಯ್ಯ  ಬೆಲೆ: ೧೩೦ ಪ್ರಕಾಶನ: ಛಂದ ಪ್ರಕಾಶನ ಮುದ್ರಣ: ೬ ಪುಸ್ತಕವು ಸುಮಾರು ೭-೮ ಕತೆಗಳ ಸಂಕಲನವಾಗಿದೆ. ಕಡಿಮೆ ಸಂಖ್ಯೆಯ...