ಪುಸ್ತಕ: ಮರುಭೂಮಿಯ ಹೂ
ಲೇಖಕಿ: ವಾರಿಸ್ ಡಿರೀ
ಅನುವಾದ: ಡಾ. ಎನ್ ಜಗದೀಶ್ ಕೊಪ್ಪ
ಬೆಲೆ: ೧೪೦
ಪ್ರಕಾಶನ: ಮನೋಹರ ಗ್ರಂಥಮಾಲಾ
ಮುದ್ರಣ: ನಾಲ್ಕನೆಯ ಮುದ್ರಣ ೨೦೧೯
ಒಬ್ಬ ಸೊಮಾಲಿಯಾದಲ್ಲಿನ ಆದಿವಾಸಿ ಹುಡುಗಿ ಗ್ಲಾಮರ್ ಲೋಕದ ಜಗದ್ವಿಖ್ಯಾತ ಮಾಡೆಲ್ ಆಗಿದ್ದಲ್ಲದೆ, ನಂತರದ ಜೀವನದಲ್ಲಿ 'ಯೋನಿ ಛೇದನ ಕ್ರಿಯೆ ವಿರುದ್ಧ ಜಾಗೃತಿ ಮೂಡಿಸುವ ಆಂದೋಲನದ ' ವಿಶ್ವಸಂಸ್ಥೆಯ ರಾಯಭಾರಿಯಾಗಿ ಹೊರಹೊಮ್ಮುವ ಅತ್ಯಂತ ರೋಮಾಂಚನಕಾರಿ ಆತ್ಮಕಥನ. ಈ ಆತ್ಮಕಥೆಯಲ್ಲಿ ಎಷ್ಟೋ ಘಟನೆಗಳು ಲೇಖಕಿ ಸ್ವತಃ ಹೇಳುವಂತೆ , ಸಿನಿಮೀಯವಾಗಿ ತೋರಿದರೂ ಅದು ಲೇಖಕಿ ಅನುಭವಿಸಿದ ಘಟನೆಗಳೇ! ಒಬ್ಬ ಮನುಷ್ಯ ಎಷ್ಟೇ ಕಷ್ಟ ಕಂಡರೂ ಸತತವಾಗಿ ಧನಾತ್ಮಕತೆಯತ್ತ ಶ್ರಮಿಸಿದರೆ ಏನೆಲ್ಲಾ ಮಾಡಬಹುದು ಎಂದು ಆತ್ಮಕಥೆಯಲ್ಲಿ ಅಪ್ರಯತ್ನಪೂರ್ವಕವಾಗಿ ದಾಖಲಾಗಿದೆ.
ಲೇಖಕಿಯ ಹೆಸರು 'ವಾರಿಸ್ ' ಅರ್ಥಾತ್ ಮರುಭೂಮಿಯಲ್ಲಿ ಮೊದಲ ಮಳೆಯ ನಂತರ ಅರಳುವ ಒಂದು ಹೂವಿನ ಹೆಸರು. ಹೆಸರಿನಂತೆಯೇ ತನ್ನ ಜೀವನವನ್ನು ಕಟ್ಟಿಕೊಂಡ ಪಯಣವನ್ನು ತುಂಬಾ ಅದ್ಭುತವಾಗಿ ಲೇಖಕಿ ದಾಖಲಿಸಿದ್ದಾರೆ. ಅಷ್ಟೇ ಚಂದವಾಗಿ ಜಗದೀಶ್ ಕೊಪ್ಪ ಅವರು ಅನುವಾದಿಸಿದ್ದಾರೆ.
ANUPAMA .K.BENACHINAMARDI
No comments:
Post a Comment