ಪುಸ್ತಕ: ಕಿಂಗ್ ಸೊಲೊಮೋನ್ಸ್ ಮೈನ್ಸ್
ಲೇಖಕ: ರೈಡರ್ ಹಗ್ಗರ್ಡ್
ಹೆಸರೇ ಹೇಳುವಂತೆ ಇದೊಂದು ನಿಧಿ ಅರಸುವ ಸಾಹಸಮಯ ಕಾದಂಬರಿಯಾಗಿದೆ. . ಕಾದಂಬರಿಯು ಅಲ್ಲನ್ ಕ್ವಾರ್ಟರ್ಮ್ಯಾನ್ ಎಂಬ ಬೇಟೆಗಾರನ ದೃಷ್ಟಿಯಿಂದ ಉಲ್ಲೇಖಿತವಾಗಿದೆ. ಕಾದಂಬರಿಯು ಅತಿ ರೋಚಕವಾಗಿದ್ದು, ಎಲ್ಲ ಸಾಹಸದಲ್ಲಿ ಓದುಗರು ಭಾಗಿಯಾಗಿದ್ದಾರೆ ಎಂಬಂತೆ ಭಾಸವಾಗುತ್ತದೆ. ಇದು ಚಲನಚಿತ್ರವಾಗಿಯೂ ತೆರೆ ಕಂಡಿದ್ದು ಬೇರೆ ಬೇರೆ ರೀತಿಗಳಲ್ಲಿ ಹಲವಾರು ಚಲನಚಿತ್ರಗಳು ಹೊರಬಂದಿದ್ದು ಇದರ ಜನಪ್ರಿಯತೆಗೆ ಸಾಕ್ಷಿಯಾಗಿದೆ.
ಅದರಲ್ಲಿನ ಕೆಲ ಸಾಲುಗಳು ಹೀಗಿವೆ:
'ಒಂದು ಸಂಜೆ, ತುಂಬಾ ಬಳಲಿಕೆಯ ನಂತರ ಒಂದು ಗುಡ್ಡದ ಹತ್ತಿರ ಬಂದು ತಲುಪಿದೆವು. ಗುಡ್ಡದ ಬುಡದಲ್ಲಿ ನದಿಯ ಒಣಗಿದ ಪ್ರದೇಶದಲ್ಲಿ ಅಲ್ಲಲ್ಲಿ ಚಿಕ್ಕ ಪುಟ್ಟ ಶುದ್ಧ ನೀರಿನ ಹೊಂಡಗಳಿದ್ದವು. ಅದರ ಇನ್ನೊಂದು ಬದಿಗೆ ಹೋದ ನಂತರ ನಮಗೆ ಒಂದು ಜಿರಾಫೆಯ ಹಿಂಡು ಕಾಣಿಸಿತು. ಆ ಹಿಂಡು ನಮ್ಮನ್ನು ನೋಡಿದೊಡನೆ ಚದುರಿ ಹೋಯಿತು. ಅದು ಗುಂಡಿನ ಪರಿಮಿತಿಯನ್ನು ದಾಟಿದ್ದರೂ ಕೂಡ, ಕ್ಯಾಪ್ಟನ್ ಗುಡ್, ಕೊನೆಯ ಜಿರಾಫೆಗೆ ಗುಂಡು ಹಾರಿಸಿದ್ದನು. ಅದೃಷ್ಟವಶಾತ್ ಅದು ಜಿರಾಫೆಯ ಕತ್ತನ್ನು ಸೀಳಿದ್ದಲ್ಲದೆ, ಜಿರಾಫೆ ಆ ಸ್ಥಳದಲ್ಲಿಯೇ ಮೃತಪಟ್ಟಿತು '

No comments:
Post a Comment