ಲೇಖಕರು: ಡಾ. ಕೆ ಎನ್ ಗಣೇಶಯ್ಯ
ಪ್ರಕಾಶನ: ಅಂಕಿತ
ಬೆಲೆ: ೧೫೦
ಮುದ್ರಣ: ನಾಲ್ಕನೇ ಮುದ್ರಣ, ೨೦೧೭
ಕಾದಂಬರಿ ಹೆಸರಿಗೆ ತಕ್ಕಷ್ಟೇ ವಿಶಿಷ್ಟ ಹಾಗು ರೋಚಕ! ಕಾದಂಬರಿಯು ಇತಿಹಾಸದ ಎಳೆಯೊಂದರಿಂದ ಪ್ರಾರಂಭವಾಗಿ, ಜಗತ್ತೆಲ್ಲ ಸುತ್ತಿಸುವುದು ಕುತೂಹಲಕರ. ಕ್ರಿಸ್ತ ಪೂರ್ವದಿಂದ ಪ್ರಾರಂಭವಾಗಿ ೨೦೦೮ ಕ್ಕೆ ಬಂದು ನಿಲ್ಲುವುದು ಹಾಗು ಮುಂದೇನು ಎಂಬ ಕಾತರದಿಂದ ಓದಿಸಿಕೊಂಡು ಹೋಗುವುದರಲ್ಲಿ ನಿಸ್ಸಂದೇಹ. ಇದರಲ್ಲಿ ಬರುವ ಪಾತ್ರ, ಸನ್ನಿವೇಶಗಳಿಗೆ ತಕ್ಕಂತೆ ಪೂರಕ ದಾಖಲೆ, ಚಿತ್ರ, ನಕಾಶೆಗಳನ್ನು ಒದಗಿಸುವುದರಿಂದ ಇದೊಂದು ನೈಜ ಘಟನೆಯೇ ಎಂಬಂತೆ ಭಾಸವಾಗುತ್ತದೆ.
ಒಂದು ಇತಿಹಾಸದ ತುಣುಕನ್ನು ಈ ರೀತಿಯಾಗಿಯೂ ವಿಜೃಂಭಿಸಬಹುದೆಂದು ಲೇಖಕರು ಬರವಣಿಗೆಯಲ್ಲಿ ಚಿತ್ರಿಸಿದ್ದಾರೆ. ಅಲ್ಲಲ್ಲಿ ಬರುವ ರೆಫರೆನ್ಸ್ ಗಳು ಇದೊಂದು ಇತಿಹಾಸದ ದಾಖಲೆ ಇರಬಹುದೇನೋ ಎಂದೆನಿಸುತ್ತದೆ. ಮುನ್ನುಡಿಯಲ್ಲೇ ಹೇಳುವಂತೆ ಕಥೆ ಯಾವಾಗಲು ಹೀಗೆಯೇ ಇರಬೇಕೆಂದು ಭಾವಿಸಬಾರದು ಎಂದು ಹೇಳುವುದರಿಂದ ಶುರುವಾಗಿ ಕಥೆ ಪೂರ್ಣವಾಗುವಷ್ಟರಲ್ಲಿ ಅನೇಕ ತಿರುವುಗಳನ್ನು ಪಡೆಯುತ್ತ ಓದುಗರನ್ನು ಪುಸ್ತಕ ಕೆಳಗಿಡದಂತೆ ಹಿಡಿದಿಡುವಲ್ಲಿ ಲೇಖಕರು ಯಶಸ್ವಿಯಾಗಿ ಗೆದ್ದಿದ್ದಾರೆ.

No comments:
Post a Comment