ಪುಸ್ತಕ: ಕೆಂಪು ಜುಟ್ಟಿನ ಹುಂಜ
ಲೇಖಕ: ವಿಕ್ತರ್ ವಾಷ್ದಯೆವ್
ಚಿತ್ರಗಳು: ಕೆ. ಅವ್ಚಿನ್ನಿಕೊವ್
ಕನ್ನಡ ಅನುವಾದ: ಕೆ ಎಲ್ ಗೋಪಾಲಕೃಷ್ಣ ರಾವ್
ಪ್ರಕಾಶನ: ರಾದುಗ ಪ್ರಕಾಶನ, ಮಾಸ್ಕೋ
ಬಹುಶಃ ಇದು, ನಾನು ಓದಿದ ಮೊಟ್ಟ ಮೊದಲ ಮಕ್ಕಳ ಸಚಿತ್ರ ಪುಸ್ತಕ! ನಾನು ಹುಟ್ಟುವುದಕ್ಕೂ ಮೊದಲು ತಂದಿದ್ದು, ಅಣ್ಣ, ಅಕ್ಕ ಓದಿದ ನಂತರ ನನ್ನ ಬಾರಿ. ಇದರಲ್ಲಿರುವ ಚಿತ್ರಗಳು ಎಷ್ಟು ಆಕರ್ಷಕವಾಗಿವೆ ಎಂದರೆ, ನಾನು ಪ್ರತಿ ಬೇಸಿಗೆ ರಜೆಯಲ್ಲಿ ತಪ್ಪದೆ ಓದುತ್ತಿದ್ದೆ. ಈಗಲೂ ಈ ಪುಸ್ತಕ ಕಂಡಿತೆಂದರೆ ಚಿತ್ರಗಳನ್ನು ನೋಡುತ್ತ ಕುಳಿತು ಬಿಡುತ್ತೇನೆ. ಕಥೆಯಲ್ಲಿರುವ ಮಾಂತ್ರಿಕ ಅಜ್ಜಿ ತರಹ ನನ್ನ ಹತ್ತಿರವೂ ಸಿಹಿಗಡಬು ಕೊಡುವ ಬೀಸುವ ಕಲ್ಲು ಇತ್ತೆಂದರೆ ಎಂದು ಊಹಿಸಿಕೊಳ್ಳುತ್ತೇನೆ
ಕತೆಯಲ್ಲಿ ಇಬ್ಬರು ಅನಾಥ ಮಕ್ಕಳು ಸಾಕಿದ ಕೆಂಪು ಜುಟ್ಟಿನ ಹುಂಜದ ಸಾಹಸಗಾಥೆ ಇದೆ. ಒಟ್ಟು ೨೦ ಪುಟಗಳು ಹಾಗೂ ೧೦ ವರ್ಣರಂಜಿತ ಚಿತ್ರಗಳಿವೆ.
ಈ ಪುಸ್ತಕದ ಬೆಲೆಯನ್ನು ನಮೂದಿಸಿಲ್ಲ. ಪುಸ್ತಕವನ್ನು ಯಾವುದೋ ಪುಸ್ತಕ ಮೇಳದಲ್ಲಿ ಕೊಂಡು ತಂದಿದ್ದಾರೆ ಅಂತ ತಂದೆಯವರು ಹೇಳಿದರು.



No comments:
Post a Comment