Thursday, March 4, 2021

ಪುಸ್ತಕ:ಕರಿಸಿರಿಯಾನ


 ಪುಸ್ತಕ:ಕರಿಸಿರಿಯಾನ   

ಲೇಖಕ: ಡಾ|| ಕೆ ಎನ್ ಗಣೇಶಯ್ಯ 

ಬೆಲೆ: ೨೧೫

ಪ್ರಕಾಶನ: ಸಾಹಿತ್ಯ ಭಂಡಾರ ಪ್ರಕಾಶನ

ಮುದ್ರಣ: ಏಳನೇಯ ಮುದ್ರಣ ೨೦೨೧

ಎಂದಿನಂತೆ ಈ ಕಾದಂಬರಿಯೂ ಕೂಡ ರೋಚಕವಾಗಿದ್ದು, ವಿಜಯನಗರ ಸಾಮ್ರಾಜ್ಯದ ಅತಿ ಸೂಕ್ಷ್ಮ ವಿಚಾರಗಳನ್ನು ಒಳಗೊಂಡಿದೆ. ಅದಕ್ಕೆ ಆಕರಗಳನ್ನು ಕೂಡ ಅಲ್ಲಲ್ಲಿ ಒದಗಿಸಿದ್ದಾರೆ. ಇತಿಹಾಸದ ಅತ್ಯೋನ್ನತ ಸಾಮ್ರಾಜ್ಯದ ಬಗ್ಗೆ ಇದ್ದ ಮಾಹಿತಿಗಳಲ್ಲದೆ ಕೇಳರಿಯದ ಸಂಗತಿಗಳನ್ನು ಕಾದಂಬರಿ ಓದುವ ಮೂಲಕ ತಿಳಿದುಕೊಳ್ಳಬಹುದು! ಇತರ ಕಾದಂಬರಿಗಳಾದ  ಕಪಿಲಿಪಿಸಾರ, ಚಿತಾದಂತ, ಬಳ್ಳಿಕಾಳಬೆಳ್ಳಿ ಹಾಗೆ ಈ ಕಾದಂಬರಿಯನ್ನೂ ಅದೇ ಶೈಲಿಯಲ್ಲಿ ಬರೆಯಲ್ಪಟ್ಟಿದ್ದರೂ ಎಲ್ಲಿಯೂ ಬೇಸರವೆನಿಸದೆ ಓದಿಸಿಕೊಂಡು ಹೋಗುತ್ತದೆ. 
ಹೆಳವರ ಹಾಡು, ಜಾನಪದ ಹಾಡುಗಳ ತಾತ್ಪರ್ಯ, ಹಂಪಿಯ ವಿಶೇಷ ಸಸ್ಯ ಸಂಪತ್ತು, ತಿರುಪತಿ ವಿಗ್ರಹದ ವಿವಾದಾಸ್ಪದ ಪುರಾವೆಗಳು, ನಕ್ಷೆಯನ್ನು ಗುರುತಿಸುವ ಪರಿ, ಅವಶೇಷಗಳ ಸುಳಿವಿನಿಂದ ನಿಧಿ ಪತ್ತೆ ಮಾಡುವ ಹಾಗೆ ಕಾದಂಬರಿಯನ್ನು ಹೆಣೆದ ರೀತಿ ಅನನ್ಯ! ಬಹುಷಃ ಚರಿತ್ರೆಯನ್ನು ಈ ತರಹ ಕೂಡ ತಿಳಿದುಕೊಳ್ಳಬಹುದು ಹಾಗು ಅದು ಸತ್ಯವಾಗಿರಲೂಬಹುದು! ಹೀಗಾಗಿಯೇ ಲೇಖಕರ ಯಾವ ಕೃತಿಯನ್ನೂ ಓದದೇ ಇರಲಿಕ್ಕಾಗದು. ಇದೆಲ್ಲವನ್ನು ಓದಿ ತಿಳಿದು ನಂತರ ಕಾದಂಬರಿ ರಚಿಸಬೇಕೆಂದರೆ ಲೇಖಕರು ಅದೆಷ್ಟು ಶ್ರಮ ವಹಿಸಿರಬಹುದು! 

No comments:

Post a Comment

ಪುಸ್ತಕ: ಶಾಲಭಂಜಿಕೆ

  ಪುಸ್ತಕ: ಶಾಲಭಂಜಿಕೆ ಲೇಖಕ: ಡಾ|| ಕೆ ಎನ್ ಗಣೇಶಯ್ಯ  ಬೆಲೆ: ೧೩೦ ಪ್ರಕಾಶನ: ಛಂದ ಪ್ರಕಾಶನ ಮುದ್ರಣ: ೬ ಪುಸ್ತಕವು ಸುಮಾರು ೭-೮ ಕತೆಗಳ ಸಂಕಲನವಾಗಿದೆ. ಕಡಿಮೆ ಸಂಖ್ಯೆಯ...